ಎಐ ಲೋಕ

ಎ ಐ ಈಗ ಸರ್ವಾಂತರ್ಯಾಮಿ

ಮಿದುಳಿನ ಬುದ್ಧಿ ಬಳಸಿ ಮನುಷ್ಯ ಮಾಡುತ್ತಿದ್ದ ಕೆಲಸಗಳನ್ನು ಚಿಟಿಕೆ ಹೊಡೆಯುವಷ್ಟು ವೇಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಾಡಿ ತೋರಿಸುವ ಟ್ರೆಂಡ್ ಶುರುವಾಗಿದೆ. ಎಐಗಳ ಸಾಲಿಗೆ ಈಗ ಆಂಥೋಪಿಕ್ ಸಂಸ್ಥೆಯ ಹೊಸ ಆವಿಷ್ಕಾರ ‘ಕ್ಲಾಡ್ ಚಾಟ್‌ಬಾಟ್’ ದೈತ್ಯಾಕಾರವಾಗಿ ನಿಂತಿದೆ. ಈ ‘ಕ್ಲಾಡ್ ಕೋವರ್ಕ್’ ಸೃಷ್ಟಿಸಿರುವ ತಲ್ಲಣಗಳೇನು?

  • ಎ ಐ ಈಗ ಸರ್ವಾಂತರ್ಯಾಮಿ. ಹೆಚ್ಚುತ್ತಿರುವ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್ – ಎಐ (ಕೃತಕ ಬುದ್ಧಿಮತ್ತೆ) ಬಳಕೆಯಿಂದ ಅನುಕೂಲಗಳು ಸಾಕಷ್ಟು ಕಾಣಿಸುತ್ತಿರುವ ಹೊತ್ತಿನಲ್ಲೇ ಐಟಿ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಆತಂಕವೊಂದು ರೆಕ್ಕೆ ಬಡಿದಿದೆ. ಭಾರತ ಸೇರಿದಂತೆ ಜಾಗತಿಕ ಐಟಿ ಕ್ಷೇತ್ರಕ್ಕೆ ಅಮೆರಿಕದ ಆಂಥೋಪಿಕ್ ಅಭಿವೃದ್ಧಿಪಡಿಸಿರುವ ಎಐ ಟೂಲ್‌ ಸಾಫ್ಟ್‌ವೇ‌ರ್ ಎಂಜಿನಿಯರುಗಳ ನಿದ್ದೆಗೆಡಿಸಿದೆ. ಆಂಥೋಪಿಕ್ ತನ್ನ ಅತ್ಯಂತ ಮುಂದುವರಿದ ಕೃತಕ ಬುದ್ಧಿಮತ್ತೆ ಮಾದರಿಯಾದ ‘ಕ್ಲಾಡ್ ಓಪಸ್ 4.6’ ಬಿಡುಗಡೆ ಮಾಡಿದೆ. ಈ . ಮಾದರಿಯು ಕೋಡಿಂಗ್‌ನಲ್ಲಿ ಉತ್ತಮವಾಗಿದ್ದು, ದೀರ್ಘ ಮತ್ತು ಸಂಕೀರ್ಣವಾದ ಕಾರ್ಯಗಳನ್ನು ನಿಪುಣ ಟೆಕ್ಕಿಯಂತೆ ನಿಭಾಯಿಸಬಲ್ಲದು. ಅಲ್ಲದೆ, ಹೆಚ್ಚು ವೃತ್ತಿಪರ ಕೆಲಸದ ಫಲಿತಾಂಶಗಳನ್ನು ನೀಡಬಲ್ಲದು.
  • ಆಂಥೋಪಿಕ್ ಎಂದರೇನು?  ಆಂಥೋಪಿಕ್ ಎಂಬುದು ಯುಎಸ್ ಮೂಲದ ಕೃತಕ ಬುದ್ಧಿಮತ್ತೆ ಕಂಪನಿಯಾಗಿದ್ದು, ಇದನ್ನು 2021ರಲ್ಲಿ ಡೇರಿಯೊ ಮತ್ತು ಡೇನಿಯಲಾ ಅಮೋಡೆ ಸೇರಿದಂತೆ ಮಾಜಿ ಓಪನ್‌ಎಐ ಸಂಶೋಧಕರು ಸ್ಥಾಪಿಸಿದರು. ಇದು ಓಪನ್‌ಐ, ಗೂಗಲ್ ಮತ್ತು ಇತರ ಮಾದರಿಗಳೊಂದಿಗೆ ಸ್ಪರ್ಧಿಸುವ ಕ್ಲಾಡ್ ಕುಟುಂಬ ಎಐ ಮಾದರಿಗಳಿಗೆ ಹೆಸರುವಾಸಿಯಾಗಿದೆ. ಆಂಥೋಪಿಕ್ ಕ್ಲಾಡ್ ಅನ್ನು ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ನೈಜ-ಪ್ರಪಂಚದ ಕೆಲಸದ ಬಳಕೆಯ ಮೇಲೆ ಕೇಂದ್ರೀಕರಿಸಿದ ಎಐ ವ್ಯವಸ್ಥೆಯಾಗಿ ರೂಪಿಸಲಾಗಿದೆ.

ಆಂಥೋಪಿಕ್‌ನ ಕ್ಲಾಡ್ 3 ಮಾದರಿಗಳು

1 ಕ್ಲಾಡ್ ಓಪಸ್: ಅತಿದೊಡ್ಡ ಕೋಡ್ ಬೇಸ್ ಗಳಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವ ಮತ್ತು ತನ್ನದೇ ಆದ ತಪ್ಪುಗಳನ್ನು ಕಂಡುಹಿಡಿಯಲು ಉತ್ತಮ ಕೋಡ್ ವಿಮರ್ಶೆ ಮತ್ತು ಡೀಬಗ್ ಮಾಡುವ ಕೌಶಲ್ಯಗಳನ್ನು ಹೊಂದಿರುವ ಅತ್ಯಂತ ಕ್ರಿಯಾಶೀಲ ಮಾದರಿಯಿದು. ೧ ಕಾಡ್ ಸಾನೆಟ್ ಸಮತೋಲಿತ ಕಾರ್ಯಕ್ರಮತೆ, ಕೋಡಿಂಗ್ ಎಂಟರ್‌ಪೈಸ್ ಏಜೆಂಟ್‌ಗಳು ಮತ್ತು ವೃತ್ತಿಪರ ಕೆಲಸಕ್ಕಾಗಿ ವಿಶ್ವದ ಅತ್ಯುತ್ತಮ ಮಾದರಿಯಾಗಿದೆ.

2 ಕಾಡ್ ಹೈಕು: ಆಂಥೋಪಿಕ್ ಎಲ್ಲಾ ಬಳಕೆದಾರರಿಗೆ ಲಭ್ಯವಿರುವ ಚಿಕ್ಕದಾದ, ಅಗ್ಗದ ಕೃತಕ ಬುದ್ಧಿಮತ್ತೆ ಮಾದರಿಯಾಗಿದ್ದು, ವೇಗವಾದ, ನಿಖರವಾದ ಉತ್ತರಗಳನ್ನು ಹುಡುಕುತ್ತಿರುವ ಜನರಿಗೆ ಈ ಮಾದರಿ ಸೂಕ್ತವಾಗಿದೆ.

ಕ್ಲಾಡ್ ಓಪಸ್ 4.6ನಲ್ಲಿ ಹೊಸದೇನಿದೆ?

  • ಉತ್ತಮ ಯೋಜನೆ ಮತ್ತು ತಾರ್ಕಿಕತೆ ಸಾಮರ್ಥ್ಯ.
  • ಹೆಚ್ಚು ಸುರಕ್ಷಿತ ಮಟ್ಟದ ಕೋಡಿಂಗ್, ಸಂಕೀರ್ಣ ಕೋಡ್ ವಿಮರ್ಶೆ ಮತ್ತು ಡೀಬಗ್ ಮಾಡುವ ಕೌಶಲಗಳು.
  • ದೊಡ್ಡ ಸಾಫ್ಟ್‌ವೇರ್ ಪ್ರಾಜೆಕ್ಟ್‌ಗಳನ್ನು ಸಲೀಸಾಗಿ ನಿರ್ವಹಿಸುವುದು.
  • ಅತ್ಯಲ್ಪ ಅವಧಿಯಲ್ಲೇ ಹೆಚ್ಚು ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ.
  • ದೀರ್ಘ ಬರವಣಿಗೆಯ ದಾಖಲೆಗಳಿಂದ ಸಂಬಂಧಿತ ಮಾಹಿತಿಯನ್ನು ಹೊರತೆಗೆಯುವುದು.

ಸಂಶೋಧನೆ ಮತ್ತು ಆರ್ಥಿಕ ವಿಶ್ಲೇಷಣೆ ನಡೆಸುವುದು. ದೈನಂದಿನ ವೃತ್ತಿಗಳಿಗೆ ಏನು ಅನುಕೂಲ?

  • ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಸ್ಥೆಗಳ ಸುಲಭ ನಿರ್ವಹಣೆ. ಈ ಸಂಶೋಧನೆಗೆ ಸಹಾಯ. ಡಾಕ್ಯುಮೆಂಟ್‌ಗಳು, ಸ್ಟೆಡ್‌ಶೀಟ್‌ಗಳು ಮತ್ತು ಪ್ರೆಸೆಂಟೇಷನ್ನುಗಳನ್ನು ರಚಿಸಲು, ಸಂಪಾದಿಸಲು ಅನುಕೂಲಕಾರಿ.
  • ಆಂಥೋಪಿಕ್, ಎಕ್ಸೆಲ್‌ನಂಥ ಪರಿಕರಗಳಲ್ಲೂ ಕ್ಲಾಡ್ ಅಪ್‌ ಗ್ರೇಡ್ ಮಾಡಿದೆ ಮತ್ತು ಪವರ್ ಪಾಯಿಂಟ್‌ನಲ್ಲಿ ಕ್ಲಾಡ್‌ನ ಸಂಶೋಧನಾ ಪೂರ್ವವೀಕ್ಷಣೆಯನ್ನು ಪರಿಚಯಿಸಿದೆ.

Leave a Reply

Your email address will not be published. Required fields are marked *

Back to top button