ಸದ್ದು ಮಾಡಿದ ದೇಸಿ ರೊಬೊ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎಐ
ಶೃಂಗದ ಎಕ್ಸ್‌ಪೋದಲ್ಲಿ ನೊಯ್ದಾದ ಗಾಲ್ಗೊಟಿಯಾಸ್ ವಿವಿ ಪ್ರತಿನಿಧಿಗಳು ಚೀನಾ ನಿರ್ಮಿತ ರೊಬೊ ಶ್ವಾನ ಪ್ರದರ್ಶಿಸಿ ವಿವಾದ ಸೃಷಿಸಿತ್ತು. ಈ ವಿವಾದದ ಬೆನ್ನಲ್ಲೇ ಬೆಂಗಳೂರು ಮೂಲದ ‘ಜನರಲ್ ಅಟಾನಮಿ’ ಸ್ಟಾರ್ಟಪ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರ ಮುಂದೆ ‘ಪರಮ್’ ಹೆಸರಿನ ರೊಬೊ ನಾಯಿ ಪ್ರದರ್ಶಿಸಿತ್ತು. ಈ ರೊಬೊ ನಾಯಿ ಕುರಿತ ವಿಡಿಯೊ ಈಗ ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದೆ.
‘ಜನರಲ್ ಅಟಾನಮಿ’ ಎಕ್ಸ್‌ನಲ್ಲಿ ವಿಡಿಯೊ ಅಪ್ ಲೋಡ್ ಮಾಡಿ, “ಅಸಂಬದ್ಧತೆಯನ್ನು ಇನ್ನು ನಿಲ್ಲಿಸಿ! ಈಗ ‘ಪರಮ್ ‘ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಇದು ಭಾರತದ ಶಕ್ತಿಶಾಲಿ ಸ್ವದೇಶಿ ರೊಬೊ ನಾಯಿ. ವಿದೇಶಗಳಿಂದ ಯಾವುದೇ ಬಿಡಿಭಾಗಗಳನ್ನು ತಂದು ಇಲ್ಲಿ ಜೋಡಿಸಿಲ್ಲ. ಎಲ್ಲವೂ ಭಾರತದಲ್ಲಿಯೇ ಹಾಗೂ ನಿರ್ಮಿತವಾಗಿದೆ. ನಮ್ಮ ದೇಶ, ನಮ್ಮ ಶತಮಾನ ಮತ್ತು ನಮ್ಮ ವಿಶ್ವಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ,” ಎಂದು ಬರೆದುಕೊಂಡಿದೆ. ಭಾರತೀಯರಿಂದಲೇ
ಬೆಂಗಳೂರಿನ ರಸ್ತೆಯ ಸಂಚಾರ ದಟ್ಟಣೆಯಲ್ಲಿ ಈ ರೊಬೊ ನಾಯಿ ನಡೆದಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ತನ್ನ ಹಾದಿಯಲ್ಲಿ ಬರುವ ಅಡೆತಡೆಗಳನ್ನು ತಾನಾಗಿಯೇ ಗುರುತಿಸುವುದು, 30 ಸೆಂಟಿಮೀಟರ್ ಎತ್ತರದವರೆಗಿನ ಮೆಟ್ಟಿಲುಗಳನ್ನು ಹತ್ತುವುದು ಮತ್ತು ಕಡಿಮೆ ಎತ್ತರದ ಜಾಗಗಳಲ್ಲಿ ಏಡಿಯಂತೆ ಸಾಗುವ ಸಾಮರ್ಥ್ಯ ಹೊಂದಿದೆ.
ಏನಿದರ ವಿಶೇಷತೆ?
ಬೆಂಗಳೂರಿನ ಸ್ಟಾರ್ಟಪ್ ‘ಜನರಲ್ ಅಟಾನಮಿ’ಯಿಂದ ಅಭಿವೃದ್ಧಿ
- 35 ಕೆ.ಜಿ ತೂಕ ಹೊಂದಿದ್ದು,
- 20 ಕೆ.ಜಿ ಭಾರ ಹೊರುವ ಸಾಮರ್ಥ್ಯ
- ಸೆಕೆಂಡ್‌ಗೆ 3 ಮೀಟರ್ ಚಲಿಸಲಿದ್ದು,
- 1 ಮೀಟರ್ ಎತ್ತರಕ್ಕೆ ಹಾರಬಲ್ಲದು
- 2 ಗಂಟೆಗಳ ಬ್ಯಾಟರಿ ಸಾಮರ್ಥ್ಯ, ಮುಂದಿನ ತಿಂಗಳಲ್ಲಿ ವಾಣಿಜ್ಯ ಬಳಕೆಗೆ ಲಭ್ಯ