ಸುದ್ದಿಜಾಲ

ಬಿಟ್‌ ಕಾಯಿನ್ ಕರ್ಮಕಾಂಡ

ಬಿಟ್‌ ಕಾಯಿನ್ ಕರ್ಮಕಾಂಡ

Photo by Jonathan Borba: https://www.pexels.com/photo/close-up-of-bitcoin-crypto-currency-coin-on-hand-14911395/

ಬಿಟ್ ಕಾಯಿನ್ ವ್ಯವಸ್ಥೆಯ ‘ಸ್ವ-ಘೋಷಿತ’ ಸಂಸ್ಥಾಪಕನ, ಸೃಷ್ಟಿಕರ್ತನ ಹೆಸರು ‘ಸಾಟೋಷಿ ನಾಕಮೋಟೋ’. ಅದು ಜಪಾನಿ ವ್ಯಕ್ತಿಯ ಹೆಸರಿನಂತಿದೆ. ಆದರೆ ವಾಸ್ತವವಾಗಿ ‘ಆ ವ್ಯಕ್ತಿಯನ್ನು ನಾವು ಕಂಡಿದ್ದೇವೆ’ ಎನ್ನುವವರಿಲ್ಲ! ಆ ವ್ಯಕ್ತಿಯ ನಿಜರೂಪ ಹಾಗೂ ವಿಳಾಸಗಳನ್ನು ಬಲ್ಲವರಿಲ್ಲ. ಆ ಹೆಸರು ನಿಜವಾದದ್ದೋ ಅಥವಾ ಹುಸಿನಾಮವೋ ಎಂಬುದೂ ಗೊತ್ತಿಲ್ಲ. ಸ್ಯಾಮ್‌ಸಂಗ್, ತೋಷಿಬಾ, ನಾಕಾಮಿಜಿ ಹಾಗೂ ಮೋಟೋರೋಲಾ ಕಂಪೆನಿಗಳ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ. ಹೆಣೆದ ಕಾಲ್ಪನಿಕ ಹೆಸರು ಇದು ಎಂಬ ಮಾತೂ ಇದೆ.

ಆ ವ್ಯಕ್ತಿ ತನ್ನ ನಿಜಸ್ವರೂಪವನ್ನು ಬಹಿರಂಗಗೊಳಿಸಲು ಇಚ್ಛಿಸುವುದಿಲ್ಲ. ಖಾಸಗಿಯಾಗಿ, ಆಗೋಚರವಾಗಿ, ಅನಾಮಧೇಯನಾಗಿ ಉಳಿಯುವ ಎಲ್ಲ ಹಕ್ಕುಗಳೂ ಆ ವ್ಯಕ್ತಿಗಿದೆ’ (ಅದು ಗಂಡೋ ಹೆಣ್ಣೆ, ಒಬ್ಬರೋ ಅನೇಕರೋ ಅದೂ ಗೊತ್ತಿಲ್ಲ) ಎಂಬುದು ಬಿಟ್ ಕಾಯಿನ್ ಅಭಿಮಾನಿಗಳ ವಾದ.

2012ರ ಡಿಸೆಂಬರ್‌ನಲ್ಲಿ ಅಮೆರಿಕದ ‘ನ್ಯೂಸ್‌ವೀಕ್’ ವಾರಪತ್ರಿಕೆ ತನ್ನ ಮುದ್ರಣ ಆವೃತ್ತಿಯನ್ನು ನಿಲ್ಲಿಸಿ ಬರೀ ಡಿಜಿಟಲ್ ಆವೃತ್ತಿಯನ್ನು ಮಾತ್ರ ಹೊರತರಲು ಶುರುಮಾಡಿತು. ಮಾರ್ಚ್ 2014ರಲ್ಲಿ ಮುದ್ರಣ ಆವೃತ್ತಿಯನ್ನು ಮತ್ತೆ ಆರಂಭಿಸಿತು. ಆ ಸಮಯದಲ್ಲಿ ಜಗತ್ತೇ ನಿಬ್ಬೆರಗಾಗುವ ರೀತಿಯ ಒಂದು ‘ಸೆನ್ಸೆ

ಷನಲ್’ ಸುದ್ದಿಯನ್ನು ಕೊಟ್ಟು, “ಬಿಗ್-ಬ್ಯಾಂಗ್’ ಕ್ರಮದ ಮೂಲಕ ಮತ್ತೆ ಮುದ್ರಣ ಆವೃತ್ತಿಯನ್ನು ನೀಡಲು ಯೋಚಿಸಿತು. ಕೇವಲ ಎರಡೇ ತಿಂಗಳಲ್ಲಿ ತನ್ನ ವರದಿಗಾರ್ತಿ ಬಿಟ್ ಕಾಯಿನ್ ಸಂಸ್ಥಾಪಕನನ್ನು ಪತ್ತೆಹಚ್ಚಿರುವುದಾಗಿ ನ್ಯೂಸ್‌ವೀಕ್ ಘೋಷಿಸಿತು! ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ 64 ವರ್ಷದ ಡೋರಿಯನ್ ನಾಕಮೋಟೋ ಎಂಬ ಜಪಾನೀ-ಅಮೇರಿಕನ್ ವ್ಯಕ್ತಿಯೊಬ್ಬನ ವಿಳಾಸ, 55 ಹಾಗೂ ‘ರಹಸ್ಯ ಇ-ಮೇಲ್ ಸಂದರ್ಶನ’ವನ್ನೂ ಮುದ್ರಿಸಿತು! ಆದರೆ ಈ ಕಥೆ ನಿರೀಕ್ಷಿತ ಮಟ್ಟದ ವಿಶ್ವಾಸವನ್ನು ಗಳಿಸಲಿಲ್ಲ. ಅವನ ಬೆನ್ನುಹತ್ತಿದ ಇತರ ಮಾಧ್ಯಮಗಳೆಲ್ಲ ‘ಇದೊಂದು ಆಧಾರರಹಿತ ಸುಳ್ಳು ಸುದ್ದಿ’ ಎಂದು ಬರೆದವು.

‘ಬಿಟ್‌ ಕಾಯಿನ್ ಯಾವುದೇ ದೇಶದ, ಯಾವುದೇ ಸರ್ಕಾರದ ಹಂಗಿಲ್ಲದೇ ಮಾರುಕಟ್ಟೆಯೇ ಸೃಷ್ಟಿಸಿ. ಮಾರುಕಟ್ಟೆಯೇ ಮೌಲ್ಯ ನಿರ್ಧರಿಸಿ. ಮಾರುಕಟ್ಟೆಯೇ ನಿರ್ವಹಿಸುವ, ಭೌತಿಕ ರೂಪವಿಲ್ಲದ, ಇಂಟರ್ನೆಟ್ ಮೂಲಕ ಬಳಸಲ್ಪಡುವ ಕರೆನ್ಸಿ, ಸ್ಪಾಕ್-ಶೇರುಗಳ ಹಾಗೆ ಅದರ ಮೌಲ್ಯ ಡಿಮ್ಯಾಂಡ್-ಸಪ್ಪೆ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಅದು ಮನುಷ್ಯ ನಾಗರಿಕತೆಯಲ್ಲೇ ಆದ್ವಿತೀಯವಾದ ಆವಿಷ್ಕಾರ. ಹಣದ ಮಹಾನ್ ಕ್ರಾಂತಿಕಾರಕ ಸ್ವರೂಪ’ ಎಂಬುದು ಅದರ ಬಳಕೆದಾರರ ಹಾಗೂ ಪ್ರವರ್ತಕರ ಅಭಿಪ್ರಾಯ. ಬಿಟ್ ಕಾಯಿನ್ ಬಳಕೆ ಹಾಗೂ ವರ್ಗಾವಣೆ ಬಹಳ ಸುಲಭ. ಬರೀ ಮೌಸ್ ಕ್ಲಿಕ್ ಮಾಡುವುದರಿಂದಷ್ಟೇ ನಿಮ್ಮ ಬಿಟ್ ಕಾಯಿನ್‌ಗಳನ್ನು ಇತರರಿಗೆ ರಹಸ್ಯವಾಗಿ ಹಾಗೂ ಕ್ಷಿಪ್ರವಾಗಿ ವರ್ಗಾಯಿಸಬಹುದು. ನಿಮ್ಮ ಬಿಟ್ ಕಾಯಿನ್ ಸಂಗ್ರಹವನ್ನು ಇಟ್ಟುಕೊಳ್ಳಲು ನಿಮ್ಮ ಬಳಿ ‘ಬಿಟ್ ಕಾಯಿನ್ ವ್ಯಾಲೆಟ್’ ಇರುತ್ತದೆ (ನಿಮ್ಮ ಇ-ಮೇಲ್ ಇನ್‌ಬಾಕ್ಸ್ ಇರುವ ಹಾಗೆ). ಅದಕ್ಕೆ ಎರಡು ಡಿಜಿಟಲ್ ಕೀಗಳಿರುತ್ತವೆ. ಒಂದು ಪಬ್ಲಿಕ್ ಕೀ, ಇನ್ನೊಂದು ಪ್ರೈವೆಟ್ ಕೀ. (ಇಲ್ಲಿ ‘ಕೀ’ ಎಂದರೆ ಅಕ್ಷರ-ಸಂಖ್ಯೆಗಳಿರುವ – ಆಲ್ವಾನ್ಯೂಮೆರಿಕ್ – ಕೋಡ್. ಇದು ಸುಮಾರು 24 ರಿಂದ 36 ಅಕ್ಷರಗಳ ಕೋಡ್). ನಿಮ್ಮ ಪಬ್ಲಿಕ್ ಕೀಯನ್ನು ಇತರರಿಗೆ ತಿಳಿಸಬಹುದು. ನಿಮ್ಮ ಪ್ರೈವೇಟ್ ಕೀ ನಿಮಗೆ ಮಾತ್ರ ತಿಳಿದಿರಬೇಕಾದದ್ದು. ನಿಮ್ಮ ಪಬ್ಲಿಕ್ ಕೀ ತಿಳಿದಿರುವ ಯಾರೇ ಆದರೂ ನಿಮಗೆ ಬಿಟ್ ಕಾಯಿನ್ಸ್ ಕಳುಹಿಸಬಹುದು. ಅದಕ್ಕಾಗಿ ಅವರು ತಮ್ಮ ವ್ಯಾಲೆಟ್ಟಿನ ಪ್ರೈವೆಟ್ ಕೀ ಬಳಸಿ, ಅದರಲ್ಲಿರುವ ಬಿಟ್ ಕಾಯಿನ್‌ಗಳನ್ನು ನಿಮ್ಮ ಪಬ್ಲಿಕ್ ಕೀಗೆ ಕಳುಹಿಸಬೇಕು. ಹಾಗೆಯೇ ನೀವೂ ಇತರರಿಗೆ. ಅವರ ಪಬ್ಲಿಕ್ ಕೀ ಮೂಲಕ, ಬಿಟ್ ಕಾಯಿನ್ಸ್Photo by David McBee: https://www.pexels.com/photo/round-silver-and-gold-coins-730564/ ಕಳುಹಿಸಬಹುದು. ಇತರರು ನಿಮಗೆ ಕಳುಹಿಸಿದ್ದನ್ನು ಪಡೆದುಕೊಳ್ಳಲು ಚಲಾವಣೆಯಲ್ಲಿರಬೇಕು.

ಆಗ ಮಾತ್ರ ಪರಿಪೂರ್ಣ ಮಟ್ಟದ ಕ್ಯಾಶ್‌ಲೆಸ್ ಎಕಾನಮಿ ಸಾಧ್ಯ. ಅಲ್ಲಿಯವರೆಗೂ ‘ಕ್ಯಾಶ್’ ಇರುತ್ತದೆ. ಜಗತ್ತಿನ ಮಟ್ಟದಲ್ಲಿ ಅಮೂರ್ತ ಹಣದ ವ್ಯವಹಾರ ಸಂಪೂರ್ಣವಾಗಿ ನಡೆಯುತ್ತದೆಯೆ? ಭೌತಿಕ ಹಣ ಜಗತ್ತಿನಿಂದ ಕಣ್ಮರೆಯಾಗುವ ಲಕ್ಷಣಗಳು ಈಗ ಕಾಣುತ್ತಿಲ್ಲ. ಆದರೆ ಜಗತ್ತು ಕ್ರಮೇಣ ‘ಲೆಸ್ ಕ್ಯಾಶ್ ಎಕಾನಮಿ’ಯತ್ತ ವಾಲುತ್ತಿದೆ. ಇದನ್ನು ನಾವು ಗಮನಿಸಬೇಕು. ಈಗಾಗಲೆ ಕೆಲವು ದೇಶಗಳು ‘ಅತ್ಯಲ್ಪ ಭೌತಿಕ ಹಣದ ಆರ್ಥಿಕತೆ’ ಎನಿಸಿಕೊಂಡಿವೆ. ಭಾರತದ ಯುಪಿಐ ಹಾಗೂ ಡಿಜಿಟಲ್ ರುಪೀ ಭಾರಿ ಸಂಚಲನ ‘ಮೂಡಿಸಿವೆ. ಇದೆಲ್ಲಾ ಹೀಗೇ ಮುಂದುವರಿದಂತೆ 21ನೇ ಶತಮಾನ ಭೌತಿಕ ಹಣದ ಅಂತ್ಯಕ್ಕೆ ಸಾಕ್ಷಿಯಾಗಬಹುದು.

ಈಗ ಹಣ ಕ್ರಮೇಣ ಭೌತಿಕ ರೂಪ ಕಳೆದುಕೊಳ್ಳುತ್ತಿದೆ. ಎಲೆಕ್ಟ್ರಾನಿಕ್ ದಾಖಲೆಗಳಲ್ಲಿ ಸಂಖ್ಯೆಗಳ ವರ್ಗಾವಣೆ ಆಗುವುದೇ ‘ಹಣದ ವ್ಯವಹಾರ’ ಎನಿಸಿಕೊಳ್ಳುವಂತಾಗಿದೆ! ಆದರೂ ಚಿನ್ನದ ಹೊಳಪು ಹಾಗೂ ಗರಿಗರಿ ನೋಟುಗಳ ವಾಸನೆ ಎಲ್ಲರಿಗೂ ತುಂಬಾ ಇಷ್ಟ! ಸದ್ಯಕ್ಕೆ ಭಾರತವೂ ನೋಟುಗಳ ಮುದ್ರಣ ನಿಲ್ಲಿಸುವುದಿಲ್ಲ. ನಾಣ್ಯಗಳ ಚಲಾವಣೆಯನ್ನೂ ನಿಲ್ಲಿಸುವುದಿಲ್ಲ.

ಈ ಮಧ್ಯೆ, ಇ-ಕಾಮರ್ಸ್, ಇ-ಸರ್ವಿಸ್ ಎಲ್ಲರ ದೈನಂದಿನ ಜೀವನಕ್ಕೆ ಬಂದಾಗಿದೆ. ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎನ್‌ಇಎಫ್‌ಟಿ, ಆರ್‌ಬಟಿಜಿಎಸ್‌, ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್, ಬಿಟ್ ಕಾಯಿನ್ಸ್ ತರಹದ ಕಿಷ್ಟೋ ಕರೆನ್ಸಿ, ಸರ್ಕಾರಗಳ ಡಿಜಿಟಲ್ ಕರೆನ್ಸಿ- ಇವೆಲ್ಲ ಜಾಗತಿಕ ಜನಜೀವನದ ಹಾಸುಹೊಕ್ಕಾಗಿವೆ. ಎಲ್ಲವೂ ಒಟ್ಟಿಗೇ ವಿಜೃಂಭಿಸುತ್ತಿವೆ.

Leave a Reply

Your email address will not be published. Required fields are marked *

Back to top button