Uncategorizedವೈರಲ್ಸುದ್ದಿಜಾಲ

ಸಂವಿಧಾನ ಪಾಲಿಸದಿದ್ರೆ ದೇಶದಿಂದ ತೊಲಗಿ

ಸಂವಿಧಾನ ಪಾಲಿಸದಿದ್ರೆ ದೇಶದಿಂದ ತೊಲಗಿ

ಮೆಟಾಗೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ | ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆ

ವಾಟ್ಸ್ ಆ್ಯಪ್‌ ನ 2021ರ ಗೌಪ್ಯತೆ ನೀತಿ ವಿಚಾರವಾಗಿ ಅದರ ಮಾಲೀಕತ್ವ ಹೊಂದಿರುವ ತಂತ್ರಜ್ಞಾನ ದಿಗ್ಗಜ ಮೆಟಾ ಸಂಸ್ಥೆಯನ್ನು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ‘ನಮ್ಮ ಸಂವಿಧಾನ ಪಾಲಿಸಲು ಆಗದಿದ್ದರೆ ಭಾರತದಿಂದ ತೊಲಗಿ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಖಡಕ್ ಎಚ್ಚರಿಕೆ ನೀಡಿದರು. ‘ನೀವು ಸಾಧ್ಯವಿಲ್ಲ. ಗೌಪ್ಯತೆಯೊಂದಿಗೆ ಆಟವಾಡಲು ನಮ್ಮ ದತ್ತಾಂಶದ ಒಂದೇ ಒಂದು ಅಂಕಿಯನ್ನೂ ಹಂಚಿಕೊಳ್ಳಲು ನಾವು ನಿಮಗೆ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದ ಸಿಜೆಐ ನೇತೃತ್ವದ ಪೀಠ, ಭಾರತೀಯರ ಶೋಷಣೆಯನ್ನು ಬೆಂಬಲಿಸು ವುದಿಲ್ಲ ಎಂದು ಅಮೆರಿಕದ ಕಂಪನಿಗೆ ಸ್ಪಷ್ಟಪಡಿಸಿತು.

10ಕ್ಕೆ ಮಧ್ಯಂತರ ಆದೇಶ: ಈ ಪ್ರಕರಣದಲ್ಲಿ ಫೆಬ್ರವರಿ 10ರಂದು ಮಧ್ಯಂತರ ಆದೇಶ ನೀಡುವುದಾಗಿ ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ತಲ್ಯ ಬಾಗಿ ಮತ್ತು ವಿಪುಲ್ ಎಂ. ಪಾಂಚೋಲಿ ಇರುವ ಪೀಠ ಪ್ರಕಟಿಸಿತು.

ವಾಟ್ಸ್ಆ್ಯಪ್ ಗೌಪ್ಯತಾ ನೀತಿಗೆ ಕಿಡಿ

ವಾಣಿಜ್ಯ ಉದ್ದೇಶಕ್ಕಾಗಿ ಯೂಸ‌ರ್ ಡೇಟಾ ಹಂಚಿಕೊಳ್ಳುವ ‘ಶೋಷಣಾತ್ಮಕ’ ನೀತಿಯನ್ನು ಸಾಲಿಸಿಟ‌ರ್ ಜನರಲ್ ತುಷಾರ್ ಮೆಹ್ರಾ ಟೀಕಿಸಿದರು. ಇದಕ್ಕೆ ಸ್ಪಂದಿಸಿದ ಸಿಜೆಐ ಸಂವಿಧಾನ ಪಾಲಿಸದಿದ್ದರೆ ಭಾರತ ಬಿಟ್ಟು ತೊಲಗಿ. ನಾಗರಿಕರ ಗೌಪ್ಯತೆ ಜತೆ ರಾಜಿ ಮಾಡಿ ಕೊಳ್ಳಲು ನಾವು ಬಿಡುವುದಿಲ್ಲ ಎಂದರು. ದೇಶದ ಲಕ್ಷಗಟ್ಟಲೆ ಬಡವರು, ಬೀದಿ ವ್ಯಾಪಾರಸ್ಥರು ಅಥವಾ ತಮಿಳು ಮಾತ್ರವೇ ಮಾತನಾಡುವವರು ಗೌಪ್ಯತಾ ನೀತಿ ಅರ್ಥ ಮಾಡಿಕೊಳ್ಳಬಲ್ಲರೇ ಎಂದು ಪೀಠ ನಿರ್ದಿಷ್ಟವಾಗಿ ಪ್ರಶ್ನಿಸಿತು.

ಏನಿದು ಪ್ರಕರಣ?: ವಾಟ್ಸ್‌ಆ್ಯಪ್‌ನ 2021ರ 4. ಗೌಪ್ಯತಾ ನೀತ ಅದರಲ್ಲೂ ಪಾವಾನ ಭಾರ ಸ್ಪರ್ಧಾ ಆಯೋಗ (ಸಿಸಿಐ) ವಿಧಿಸಿದ್ದ 213 ಕೋಟಿ ರೂ.ದಂಡವನ್ನು ಎತ್ತಿ ಹಿಡಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ(ಎನ್ ಸಿಎಲ್‌ಎಟಿ)ದ ಆದೇಶವನ್ನು ಪ್ರಶ್ನಿಸಿ ಮೆಟಾ ಮತ್ತು ವಾಟ್ಸ್ಆ್ಯಪ್ ಅರ್ಜಿ ಸಲ್ಲಿಸಿವೆ. ಜಾಹೀರಾತು ಉದ್ದೇಶಗಳಿಗಾಗಿ ಬಳಕೆದಾರರ ದತ್ತಾಂಶ (ಯೂಸರ್ ಡೇಟಾ) ಹಂಚಿಕೊಳ್ಳುವ ಕುರಿತು ಸಿಸಿಐ ಒಂದು ಕ್ರಾಸ್-ಅಪೀಲ್ ಕೂಡ ಸಲ್ಲಿಸಿತ್ತು. ಕಂಪನಿ ‘ಅಧಿಕಾರ ದುರುಪಯೋಗ’ ಮಾಡಬಾರದೆಂಬ ಷರತ್ತಿನೊಂದಿಗೆ ನ್ಯಾಯಾಧಿಕರಣ ಅದಕ್ಕೆ ಅನುಮತಿ ನೀಡಿತ್ತು. ವಿಚಾರಣೆ ವೇಳೆ ಸಿಜೆಐ ತಮಗಾದ ಅನುಭವ ಬಿಚ್ಚಿಟ್ಟರು. ‘ಹವಾಮಾನ ವೈಪರೀತ್ಯದಿಂದ ಅಸ್ವಸ್ಥತೆ ಉಂಟಾಗಿದೆ ಎಂದು ವಾಟ್ಸ್ಆ್ಯಪ್‌ನಲ್ಲಿ ವೈದ್ಯರಿಗೆ ಸಂದೇಶ ಕಳಿಸಿದರೆ ಹಾಗೂ ವೈದ್ಯರು ಕೆಲವು ಔಷಧಗಳನ್ನು ಸೂಚಿಸಿದಾಗ ತಕ್ಷಣವೇ ನಿಮಗೆ ಜಾಹೀರಾತುಗಳು ಬರಲು ಆರಂಭವಾಗುತ್ತವೆ’ ಎಂದು ನ್ಯಾ.ಸೂರ್ಯ ಕಾಂತ್ ಹೇಳಿದರು.

Leave a Reply

Your email address will not be published. Required fields are marked *

Back to top button