ಯಾವ ಭಾಷೆ ಕಲಿತರೂ ಕನ್ನಡವನ್ನೇ ಬೆಳೆಸುವೆ!
ಕೊಡಬೇಕಿದೆ ಕನ್ನಡಕ್ಕೆ ಒತ್ತು,
ಈ ಹೊತ್ತು!
ಕನ್ನಡಿಗರ ಸನ್ನಡತೆಗೆ
ಉಂಟೇ ಕುತ್ತು?
ಕನ್ನಡತಿಯ ಕನ್ನಡದ ಡಿಂಡಿಮ
ಕನ್ನಡಿಯಲ್ಲಿನ ಗಂಟ್ಟಷ್ಟೆ ಆದರೆ
ನಮಗೇ ಅಲ್ಲವೆ ಆಪತ್ತು?
ಕನ್ನಡವ ಓದುತಲಿ
ಕನ್ನಡಕ ಬಂದರು ಸೈ
ಮಸೂರ ಬಳಸುವೆ
ಕನ್ನಡಾಂಬೆಗೆ ಜೈ!
ರತ್ನನ ಪದಗಳಂತಲ್ಲದಿದ್ದರೂ
ಮಾತೃ ಭಾಷೆಗೆ,
ನನದೊಂದು ಅಳಿಲು ಸೇವೆ!