ಕಲೆ-ಸಾಹಿತ್ಯ

ಅಪ್ಪನ ಕಡೇ ಆಸೆ.

ಮಿನಿ ಕಥೆ

ನುಮಂತರಾಯರು ಆಗತಾನೆ ಎದ್ದು ಫ್ಪೆಶ್‌ ಅಪ್ ಆಗಿ ಕಾಫಿ ಕುಡಿದು ತನ್ನ ಸ್ನೇಹಿತ ರಘುಪತಿ ಬೆಳಗಿನ ವಾಕಿಂಗ್ ಗೆ ಬರುತ್ತಾನೆಂದು ಕಾದಿರುವಾಗ
ಕರೆಗಂಟೆ ಶಬ್ದವಾದ ತಕ್ಷಣ‌ ಓ ರಘುಪತಿ ಬಂದನೆಂದು ಬಂದೆ ಇರಪ್ಪ ಎನ್ನುತ್ತಾ ಬಾಗಿಲು ತೆಗೆದಾಗ ಬಾಗಿಲಲ್ಲೇ ನಿಂತಿದ್ದ ರಘುಪತಿ ಹೊರಡೋಣವಾ ಎಂದಾಗ ನಡೆಯಪ್ಪ ಎಂದು ಹೇಳಿ ಬಾಗಿಲಿಗೆ ಬೀಗ ಹಾಕಿ ಇಬ್ಬರೂ ಜೊತೆಯಾಗಿ ಹೋಗುತ್ತಿರುವಾಗ ರಘುಪತಿ ಮಾತನಾಡಿ ಏನಪ್ಪಾ ಮಗ ಸೊಸೆ ಮೊಮ್ಮಗ ಬರುತ್ತಾರೆ ಎಂದಿದ್ದೆಯಲ್ಲಾ ಬರಲಿಲ್ಲವೇ? ಎಂದು ಪ್ರಶ್ನಿಸಿದಾಗ ನಾಳೆ ಬೆಳಿಗ್ಗೆ ಬರುತ್ತಾರೆ ಎಂದು ಹನುಮಂತರಾಯರು ನೀರಸವಾಗಿ ಹೇಳಲು. ಅಯ್ಯೋ ಯಾಕಯ್ಯಾ ಮಗ ಬರುತ್ತಾರೆಂದರೆ ಸಂತೋಷವಿಲ್ಲವೇ ಎಂದು ಪ್ರಶ್ನಿಸಲು. ವರ್ಷಕ್ಕೊಮ್ಮೆ ಬರುತ್ತಾನೆ ತಿಂಗಳಿದ್ದು ಹೋಗುತ್ತಾನೆ. ಒಂದು ತಿಂಗಳ‌ಿದ್ದು ಹೋದ ನಂತರ ಪುನಃ ಒಂಟಿ ಜೀವನವಲ್ಲವೇ ಎಂದು ರಘುಪತಿ ವಿಷಾದದಿಂದ ಕೇಳಿದಾಗ ಒಂದು ತಿಂಗಳಾದರೂ ಸಂತೋಷದಿಂದ ಇರಬಹುದಲ್ಲವೇ ಎಂದು ಅವರ ಸ್ನೇಹಿತ ಹೇಳಿದ ಮಾತಿಗೆ, ಹನುಮಂತರಾಯರು ನಿರಾಶಾಭಾವದಿಂದ ವಿಷಾಧಬಾವದಿಂದ ಕೈ ಸಂಜ್ಞೆ ಮಾಡುತ್ತಾ ಅಂದಿನ ವಾಕಿಂಗ್ ಮುಗಿಸಿ ಮನೆಗೆ ಬಂದು ಅಂದಿನ ಕಾರ್ಯಗಳನ್ನು ಮಾಡಿ ಮಲಗಿದ ನಂತರ ಮಾರನೇ ದಿನ ಬೆಳಿಗ್ಗೆ ಮಗ ಸೊಸೆ ಮೊಮ್ಮಗ‌ ಬರುತ್ತಾರೆಂದು ಕಾದು ಕುಳಿತಿರುವಾಗ ಕರೆಗಂಟೆ ಶಬ್ದವಾಗಿದ್ದು ತಕ್ಷಣ ಹನುಮಂತರಾಯರು ಬಾಗಿಲು ತೆಗದು ಎದುರುಗಡೆ ಮಗ ಸೊಸೆ ಮೊಮ್ಮಗ ನಿಂತಿರುವುದನ್ಮು ನೋಡಿ ಸಂತೋಷವಾಗಿ ಮುಗುಳ್ನಗೆ ಬೀರುತ್ತಾ,,,,ಬನ್ಮಿ ಒಳಗೆ ಎನ್ನುತ್ತಾರೆ. ಬಾ ಪುಟ್ಟಾ ನಿನ್ನ ನೋಡಿ ವರ್ಷವಾಗಿತ್ತಲ್ಲೋ ಎಷ್ಟು ದೊಡ್ಡವನಾಗಿದ್ದೀಯಾ ಎನ್ನುತ್ತಾ ಮೊಮ್ಮಗನನ್ನು ಎತ್ತಿಕೊಂಡು ಕೆನ್ನೆಗೆ ಮುತ್ತುಕೊಡಲು ಹೋದಾಗ ಹನುಮಂತರಾಯರ ಸೊಸೆ ಸಿಡುಕಿನಿಂದ ಮಾವ ಮಗುವಿಗೆ ಹಾಗೆಲ್ಲಾ ಮುತ್ತು ಕೊಡಬೇಡಿರಿ ಅಲರ್ಜಿ ಆಗುತ್ತದೆಂದಾಗ ಮೊಮ್ಮಗನನ್ನು ಮುದ್ದಿಸಲೂ ಪರ್ಮಿಷನ್ ಇಲ್ಲವೆಂದು ಮೊಮ್ಮಗನನ್ನು ಎತ್ತಿಕೊಂಡು ಕೆಳಗಿಳಿಸುತ್ತಾರೆ ಒಳಗೆ ಬಂದ ನಂತರ ಎಲ್ಲರೂ ಕೈಕಾಲು ಮುಖ ತೊಳೆದು ಬನ್ನಿ ಕಾಫಿ ಕೊಡುತ್ತೇನೆಂದು ಹೇಳಿ ಎಲ್ಲರೂ ಫ್ರೆಶ್‌ ಅಪ್ ಆಗಿ ಬಂದ ನಂತರ ಕಾಫಿಯನ್ನು ಕೊಟ್ಚಾಗ ಅಪ್ಪಾ ಆ ದೇಶದ ಕಾಫಿ ಕುಡಿದು ಬಾಯೆಲ್ಲಾ ಕೆಟ್ಚುಹೋಗಿತ್ತು ಈ ಕಾಫಿ ಕುಡಿದು ಈಗ ಫ್ರೆಶ್‌ ಆಯಿತೆಂದು ಹೇಳಿ ಅವರ ಮಗ ಕಾಫಿ ಕುಡಿಯುತ್ತಾ ಸ್ವಲ್ಪ ಹೊತ್ತು ಮಾತನಾಡಿ ಸ್ನಾನಕ್ಕೆ ಹೋಗಿ ಬರುವುದರೊಳಗೆ ಬಿಸಿ ಬಿಸಿ ತಿಂಡಿ‌ ರಡಿ ಮಾಡಿರುತ್ತಾರೆ ಹನುಮಂತರಾಯರು ಮಗ ಸೊಸೆ ಮೊಮ್ಮಗ ಬಂದಿದ್ದರಿಂದ ಹನುಮಂತರಾಯರಿಗೆ ಮನಸ್ಸಿಗೇನೋ ಉಲ್ಲಾಸವಾಗಿರುತ್ತದೆ. ಆದರೆ ಪುನಃ ಒಂದು ತಿಂಗಳ‌ ನಂತರ ವಾಪಸ್‌ಹೊರಟು ಹೋಗುತ್ತಾನೆಂದು ನೆನಸಿಕೊಂಡು ದುಃಖ ಉಮ್ಮಳಿಸಿ ಬಂದು ಬಹಳ ದುಃಖ‌ವಾಗಿ ಮನಸ್ಸು ತಾನಾಗಿ ಮುಡುಗಟ್ಚುತ್ತದೆ ಇದೇ ರೀತಿ ಇಪ್ಪತ್ತೈದು ದಿನಗಳು ಖುಷಿಯಿಂದ ಕಳೆದಿದ್ದ ಹನುಮಂತರಾಯಯರಿಗೆ ಇನ್ನು ಕೇವಲ ಐದು ದಿನ ಮಾತ್ರ ಮಗ ಸೊಸೆ ಮೊಮ್ಮಗ ಇರುತ್ತಾರೆಂದು ನೆನಸಿಕೊಂಡಾಗ ದುಃಖ ಉಮ್ಮಳಿಸಿ ಬರುತ್ತದೆ. ಐದು ದಿನಗಳ ನಂತರ ಪುನಃ ಒಂಟಿ ಗುಬ್ಬಿ ರೀತಿ ಇರಬೇಕೆಂದು ನೆನಸಿಕೊಂಡು ನಿರಾಶೆಗೊಳ್ಳುತ್ತಾರೆ. ಆ ದಿನ ರಾತ್ರಿ ಊಟವಾದ ಮೇಲೆ ಮಗನನ್ನು ತನ್ನ ರೂಮಿಗೆ ಕರೆಸಿಕೊಂಡು ಅಮೇರಿಕಾ ಬಿಟ್ಚು ಇಲ್ಲೇ ಬಂದು ಬಿಡು ನಾನೂ ಒಂಟಿಯಾಗಿದ್ದು ತುಂಬಾ ಬೇಸರವಾಗುತ್ತಿದೆ ಎಂದು ದೈನ್ಯತೆಯಿಂದ ಕೇಳಿದಾಗ ಅಪ್ಪಾ ಸಡನ್ನಾಗಿ ಬಿಟ್ಟು ಬರಲು ಸಾಧ್ಯವಿಲ್ಲಪ್ಪಾ ಅದೂ ಅಲ್ಲದೆ ನಿನ್ನ ಸೊಸೆ ಅಲ್ಲೇ ಇರಬೇಕೆಂದು ಹಠ‌ಮಾಡುತ್ತಿದ್ದಾಳೆ ಎಂದು ಅವರ ಮಗ ಹೇಳಿದ ಮಾತಿಗೆ ಸಾವಿರಾರು ಮೈಲಿ ನೀನು ಹೊರಟು ಹೋದರೆ ನನ್ನ ಗತಿ ಏನಪ್ಪಾ ನಿನ್ನ ಅಮ್ಮ ಸತ್ತಾಗಲೂ ಕರ್ಮ ಮಾಡಲು ನೀನು ಬರಲೇ‌ ಇಲ್ಲ. ನಾನು ಇದ್ದಿದ್ದಕ್ಕೆ ನಿನ್ನ ಅಮ್ಮನ ಶ್ರಾದ್ದ ಕರ್ಮ ಮಾಡಿದೆ. ಏನಾದರೂ ನಾನು ಗೊಟಕ್ ಎಂದರೆ ನಾನು ಅನಾಥ ಹೆಣವಾಗಬೇಕಲ್ಲೋ ಎನ್ನಲು. ಹಾಗೇನೂ ಆಗುವುದಿಲ್ಲ ಬಿಡಪ್ಪಾ ಐದು ವರ್ಷ‌ ಕಳೆದ ಮೇಲೆ ಇಲ್ಲಿಗೆ ಬರಲು ಪ್ರಯತ್ನಿಸುತ್ತೇನೆ ಎನ್ನುತ್ತಾನೆ ಅವರ ಮಗ. ಏನು ಬರುತ್ತೀಯೋ ಏನೋ ? ನನಗೂ ವಯಸ್ಸಾಗುತ್ತಿದೆ ಯಾವಾಗ ಈ ದೇಹದ ಉಸಿರು ನಿಂತುಹೋಗುತ್ತದೋ ಏನೋ?ನಾನು ಸತ್ತರೆ ಅನಾಥ ಹೆಣವಾಗುತ್ತೇನೆ ಕಣಪ್ಪಾ ಎಂದು ಅವರಪ್ಪ ನುಡಿಯಲು ಹಾಗೇನೂ ಆಗುವುದಿಲ್ಲ ಬಿಡಪ್ಪಾ ಎಂದು ಅವರ ಮಗ ಸಮಾಧಾನ ಮಾಡುತ್ತಾನೆ. ಹೋಗಲೀ ಇನ್ನೂ ಹದಿನೈದು ದಿನಗಳು ರಜೆಯನ್ನು ಎಕ್ಸ್ಟೆಂಡ್ ಮಾಡು ಎಂದು ಹನುಮಂತರಾಯರು ನುಡಿಯಲು ಅಪ್ಪಾ ಒಂದು ತಿಂಗಳು ಮಾತ್ರ ನನಗೆ ವರ್ಕ್ ಫ್ರಮ್ ಹೋಮ್ ಇರುತ್ತದೆ ನಂತರ ಆಫೀಸಿಗೆ ಹೋಗಲೇ ಬೇಕು. ಅದಕ್ಕೆ ಒಂದು ತಿಂಗಳು ಇಲ್ಲಿಂದಲೇ ಕೆಲಸ ಮಾಡುತ್ತೇನೆ ಎನ್ನುತ್ತಾನೆ ಅವರ ಮಗ ಹನುಮಂತರಾಯರು ಆಯ್ತು ಬಿಡಪ್ಪಾ ನನ್ನ ಕರ್ಮ ಅನುಭವಿಸುತ್ತೇನೆಂದು ಹೇಳುತ್ತಾ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಕಷ್ಟ ಸುಖ ಹೇಳಿ, ಅಪ್ಪ ಮಗನ ಮಾತು ಕತೆ ಮುಗಿಯುವ ವೇಳೆಗೆ ಮದ್ಯ ರಾತ್ರಿ ಒಂದು ಗಂಟೆಯಾಗಿರುತ್ತದೆ. ಮಗನು ಮಲಗಲು ಹೊರಗೆ ಬಂದಾಗ ಹನುಮಂತರಾಯರಿಗೆ ನಿದ್ದೆ ಬರುವುದೇ ಇಲ್ಲ. ರಾತ್ರಿಯೆಲ್ಲಾ ಅಕ್ಕ ಪಕ್ಕ ಹೊರಳಾಡುತ್ತಿರುತ್ತಾರೆ.

ಮಾರನೇ ದಿನ ಬೆಳಿಗ್ಗೆ ಏಳು ಗಂಟೆಯಾದರೂ ಅಪ್ಪನು ಕಾಫಿ ಕೊಡಲಿಲ್ಲವೆಂದುಕೊಂಡು ಅಪ್ಪಾ ಅಪ್ಪಾ ಎನ್ನುತ್ತಾ ಅಪ್ಪನ ರೂಮಿಗೆ ಬಂದು ನೋಡಿದಾಗ ಹನುಮಂತರಾಯರ ಮಗನಿಗೆ ಜಂಘಾಬಲವೇ ಉಡುಗಿ ಹೋಗುತ್ತದೆ. ಅ…ಅ… ಅಪ್ಪಾ ಎಂದು ಜೋರಾಗಿ ಕೂಗಿದಾಗ ಅವನ ಹೆಂಡತಿ ಏನಾಯ್ತೂ ರೀ ಎನ್ನುತ್ತಾ ಅವಳ ಮಾವನ ರೂಮಿಗೆ ಬಂದಾಗ. ಅವಳ ಗಂಡನಿಗೆ ಮಾತನಾಡಲಾಗದೆ ಮೇಲೆ ಫ್ಯಾನಿನ ಕಡೆ ಕೈ ತೋರಿಸುತ್ತಾ ಅಪ್ಪಾ,,,,,ಅಪ್ಪಾ,,,,, ಎಂದು ಬಿಕ್ಕಿ ಬಿಕ್ಕಿ ಅತ್ತಾಗ ಅವನ ಹೆಂಡತಿ ಫ್ಯಾನಿನ ಕಡೆ ನೋಡಿದ ತಕ್ಷಣ‌ ಅಯ್ಯೋ ರೀ ಇದೇನ್ರೀ ನಿಮ್ಮಪ್ಪ ನೇಣುಹಾಕಿಕೊಂಡಿದ್ದಾರೆ ಎಂದು ನಡುಗುತ್ತಾ ಕೇಳುತ್ತಾಳೆ ಅವನ ಹೆಂಡತಿ. ಅಪ್ಪನ ಹಾಸಿಗೆಯ ಮೇಲೆ ಒಂದು ಪತ್ರ ಇರುವುದನ್ನು ನಿಧಾನವಾಗಿ ಮಗ ನೋಡಿ‌ ಓದಿದಾಗ. ಅದರಲ್ಲಿ ಪ್ರೀತಿಯ ಮಗನೇ ನಿನಗೆ ಒಳ್ಳೆಯದಾಗಲಿ ನೀನು ಐದು ದಿನಕ್ಕೆ ವಾಪಸ್‌ ಹೊರಟು ಹೋಗುತ್ತಿದ್ದೀಯಾ, ಆಗ ನಾನು ಪುನಃ ಒಂಟಿಯಾಗುತ್ತೇನೆ. ಒಂಟಿ ಜೀವನ ನಡೆಸುವುದು ಬಹಳ ಕಷ್ಟವಾದ ಕೆಲಸ. ನಿಮ್ಮಮ್ಮ ಸತ್ತಾಗ‌ ನೀನು ಬರಲೇ ಇಲ್ಲ. ನಾನೇ ಎಲ್ಲಾ ಕಾರ್ಯ ಮುಗಿಸಿದೆ. ಈಗ ನಾನು ಸತ್ತರೆ ನನ್ನನ್ನು ನೋಡಲು ನೀನು ಬರುವುದು ಅನುಮಾನವಾಗಿದೆ. ನನ್ನ ಚಿತೆಗೆ ಮಗನಾದ ನೀನೇ ಬೆಂಕಿ ಇಡಬೇಕೆಂದು ನನ್ನ ಕಡೇ ಆಸೆಯಾಗಿದೆ. ಆದ್ದರಿಂದ ಈ ಕಠೋರ ನಿರ್ಧಾರ ತೆಗೆದುಕೊಂಡಿದ್ದೇನೆ. ನೀನು ಚಿಕ್ಕವನಾದರೂ ನಿನ್ನಲ್ಲಿ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಕ್ಷಮಿಸು ನಿನಗೆ ಒಳ್ಳೆಯದಾಗಲಿ ಎಂದು ಬರೆದಿರುವುದನ್ನು ಓದಿ ಮುಗಿಸುವ ವೇಳೆಗೆ ಅವರ ಮಗನ ಕಣ್ಣಿನ ನೀರು ಕೆನ್ನೆಯ ಮೇಲೆ ಹರಿದಿರುತ್ತದೆ. ಅಪ್ಪಾ ಅಪ್ಪಾ ಎಂದು ಹೇಳುತ್ತಾ ಗೋಡೆಗೆ ಒರಗುತ್ತಾನೆ.

ಡಾ. ಎನ್. ಮುರಳೀಧರ್
ವಕೀಲರು ಹಾಗು ಸಾಹಿತಿ
ನೆಲಮಂಗಲ
(ಮಂಗಲಧರೆ)

Leave a Reply

Your email address will not be published. Required fields are marked *

Back to top button